ಆನ್ ಲೈನ್ ಸ್ಕೂಲ್ ಆಫ್ ಪ್ರಾಫಿಟ್ಸ್ ನ ಅಡಿಬರಹ - ಘಟಕ 1
Kannada

ಕೋರ್ಸ್ ಅವಲೋಕನ


ಬೆರಕ ಆನ್‌ಲೈನ್ ಕಲಿಕಾ ವೇದಿಕೆಗೆ ಶುಭಾಶಯಗಳು ಮತ್ತು  ಸುಸ್ವಾಗತ!

ನೀವು ಒಂದು ದೀರ್ಘವಾದ ಯಾತ್ರೆಯನ್ನು ಪ್ರಾರಂಭಿಸಲಿರುವಿರಿ; ಅದು " ಒಬ್ಬ ಪ್ರವಾದಿಯ ತಯಾರಿಕೆ ಮತ್ತು ಸೇವೆಯ" ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ. ಇದು ಪ್ರವಾದಿ ಯೆಝೆಕಿಯಾ ಫ್ರಾನ್ಸಿಸ್ ಅವರ ಶ್ರೇಷ್ಠವಾದ ಮೇರುಕೃತಿಯಾಗಿದೆ. ಈ ಕೋರ್ಸ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಹೆಚ್ಚು ಸಂವಾದಾತ್ಮಕವಾದ ಈ ವೀಡಿಯೊ ಪಾಠಗಳಲ್ಲಿ ನಿಮ್ಮ ಸಮಯ ಕಳೆಯಲು ದಯವಿಟ್ಟು ಸಿದ್ಧರಾಗಿರಿ.

 ಪ್ರತಿಯೊಂದು ಪಾಠವೂ ಒಂದು ಸಂಕ್ಷಿಪ್ತವಾದ ಪರಿಚಯ ಮತ್ತು ವೀಕ್ಷಿಸಲು ಒಂದು  ವೀಡಿಯೊವನ್ನು ಹೊಂದಿರುತ್ತದೆ. ಪ್ರತಿನಿಧಿಗಳು ಸಾಮಾನ್ಯವಾಗಿ ಮಿಂಚಿನಂತೆ ಉತ್ಸಾಹವನ್ನು ಬೆಳಗಿಸುವದೆಲ್ಲವನ್ನೂ ಟಿಪ್ಪಣಿ ಮಾಡುತ್ತಾರೆ. ಅದು ದೇವರು ನಿಮ್ಮ ಆತ್ಮದೊಂದಿಗೆ ಮಾತನಾಡುವುದಾಗಿದೆ. ಪ್ರವಾದಿ ಯೆಝೆಕೀಯರು ಮೊದಲ ಪಾಠದಲ್ಲಿ ಹೇಳುವಂತೆ, ಇದು ಒಂದು ಸತ್ಯವೇದ ಅಧ್ಯಯನ ಅಥವಾ ದೈವಶಾಸ್ತ್ರದ ಗ್ರಂಥವಲ್ಲ. ಇದು ನಮ್ಮ ಕಾಲಕ್ಕೆ ದೇವರ ಧ್ವನಿಯಾಗಿದೆ. ಆದ್ದರಿಂದ ಪವಿತ್ರಾತ್ಮನಿಗೆ ಹೊಂದಿಕೊಳ್ಳಿರಿ ಮತ್ತು ಪ್ರವಾದನಾ ನುಡಿಯನ್ನು ಹಿಡಿದುಕೊಳ್ಳಿರಿ.

 ಪ್ರತಿ ಪಾಠಕ್ಕೂ ಸಾರಾಂಶವಿದೆ, ಅದು ಮುಖ್ಯ ಅಂಶಗಳನ್ನು ಮತ್ತು ಪ್ರಕಟನೆಗಳಿಗಾಗಿ ವಾಕ್ಯಗಳ ಉಲ್ಲೇಖಗಳನ್ನು ಪಟ್ಟಿ ಮಾಡುತ್ತದೆ. ಈ ವಿಭಾಗದ ಮೂಲಕ ಸಾಗುವ ಓಟವು ನಿಮ್ಮನ್ನು ವಿಮರ್ಶೆಯ ವಿಭಾಗಕ್ಕೆ ಸಹ ಸಿದ್ಧಪಡಿಸುತ್ತದೆ.

 ಪ್ರವಾದನಾ ಸ್ವರ(ಧ್ವನಿ)ಯನ್ನು ನೀವು ಎಷ್ಟು ಚೆನ್ನಾಗಿ ಸ್ವೀಕರಿಸಿದ್ದೀರಿ ಎಂಬುದನ್ನು ಪರಿಶೀಲಿಸಲು ವಿಮರ್ಶೆಯ ವಿಭಾಗವನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ.

ನೀವು ಪ್ರವಾದನಾ ಧ್ವನಿಯನ್ನು ಪರೀಕ್ಷಿಸಲು ಮತ್ತು ಅದಕ್ಕೆ ಹೊಂದಿಕೊಳ್ಳಲು ನಿಮಗೆ  ಉತ್ತರಗಳು ಕೊಡಲ್ಪಟ್ಟಿವೆ. ಸರಿಯಾದ ಉತ್ತರಗಳನ್ನು ಪಡೆಯಲು ನೋಡಬೇಡಿ. ದೇವರ ಸ್ವರವನ್ನು ಕೇಳಲು ಮತ್ತು ದೇವರ ಹೃದಯಕ್ಕೆ ಸಂಪರ್ಕ ಹೊಂದಲು ನೋಡಿರಿ.

 ಅಂತಿಮವಾಗಿ, ನಮಗೆ ವಿಮರ್ಶಾತ್ಮಕ  ಪ್ರಶ್ನೆಗಳಿವೆ. ಇವು ನಿಮ್ಮ ಜೀವನದಲ್ಲಿ ಪ್ರವಾದನಾ ನುಡಿಯನ್ನು ಅನ್ವಯಿಸುವುದಕ್ಕಾಗಿ ಇರುವಂಥವುಗಳಾಗಿವೆ. ಇವುಗಳನ್ನು ಪರಾಮರ್ಶಿಸಿರಿ ಮತ್ತು ಅಳಯಲಾಗದಷ್ಟು ಆಶೀರ್ವಾದ ಹೊಂದಿರಿ! ಹಿಂದಿನ ಪಾಠವನ್ನು ಪೂರ್ಣಗೊಳಿಸಿದ ನಂತರ ಮತ್ತು ಅವುಗಳು ಚಿಕ್ಕದಾಗಿದ್ದರೂ ಮತ್ತು ಗರಿಗರಿಯಾಗಿದ್ದರೂ ಸಹ ಪ್ರಶ್ನೆಗಳು ಮತ್ತು ವಿಮರ್ಶೆಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ಪಾಠವನ್ನು ಪ್ರವೇಶಿಸಬಹುದು.

 ಈ ಸರಣಿಯು 2020 ರ ಬಿಕ್ಕಟ್ಟಿನ ಸಮಯದಲ್ಲಿ ಎಂಟು ತಿಂಗಳುಗಳು ಮತ್ತು ನೂರಕ್ಕೂ ಹೆಚ್ಚು ಅವಧಿಗಳನ್ನು ವ್ಯಾಪಿಸಿರುವ ಪ್ರವಾದನಾ ಪ್ರಕಟನೆಯ ಹೊರಸೂಸುವಿಕೆಯಾಗಿದೆ. ಈ ಕೋರ್ಸ್‌ಗೆ ಸೇರುವ ಪ್ರತಿನಿಧಿಗಳ ಪ್ರಯೋಜನಕ್ಕಾಗಿ, ನಾವು ಐದು ಹಂತಗಳನ್ನು ನೀಡುತ್ತೇವೆ.

 

·         ಘಟಕ  1: 1  ರಿಂದ 20 ವೀಡಿಯೊ ಪಾಠಗಳನ್ನು ಒಳಗೊಂಡಿದೆ.

·         ಘಟಕ 2: 21 ರಿಂದ 40 ವೀಡಿಯೊ ಪಾಠಗಳನ್ನು ಒಳಗೊಂಡಿದೆ.

·         ಘಟಕ 341 ರಿಂದ 60 ವೀಡಿಯೊ ಪಾಠಗಳನ್ನು ಒಳಗೊಂಡಿದೆ.

·         ಘಟಕ 461 ರಿಂದ 80 ವೀಡಿಯೊ ಪಾಠಗಳನ್ನು ಒಳಗೊಂಡಿದೆ.

·         ಘಟಕ 581 ರಿಂದ 100 ವೀಡಿಯೊ ಪಾಠಗಳನ್ನು ಒಳಗೊಂಡಿದೆ.

 

ದೇವರು ನಿಮ್ಮನ್ನು ಆಶೀರ್ವದಿಸಲಿ ಮತ್ತು ಪ್ರವಾದನಾ ಯಾತ್ರೆಯನ್ನು ಆನಂದಿಸಿ!

 ಬೆರಕ ಶೈಕ್ಷಣಿಕ ತಂಡ